. Washington D.C., DC, USA
ಜೋ ಬಿಡೆನ್ ಸಂಪುಟದಲ್ಲಿ ಇಬ್ಬರು ಭಾರತೀಯ-ಅಮೆರಿಕನ್ನರಿಗೆ ಪ್ರಮುಖ ಸ್ಥಾನ
ಇಬ್ಬರು ಭಾರತೀಯ-ಅಮೆರಿಕನ್ನರು ಬಿಡೆನ್ ಸಂಪುಟ ಸೇರುವ ಸಾಧ್ಯತೆ ಇದೆ (Photo Credit: Facebook / @Joe Biden)
- ಬಿಡೆನ್ ಸಂಪುಟದಲ್ಲಿ ಪ್ರಮುಖ ಸ್ಥಾನ ಪಡೆಯಲಿರುವ ಇಬ್ಬರು ಭಾರತೀಯ-ಅಮೆರಿಕನ್ನರು
- ಡಾ.ವಿವೇಕ್ ಮೂರ್ತಿಗೆ ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಹುದ್ದೆ
- ಇಂಧನ ಕಾರ್ಯದರ್ಶಿ ಹುದ್ದೆಗೆ ಅರುಣ್ ಮಜುಂದಾರ್ ನೇಮಕ ಸಾಧ್ಯತೆ
ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಅವರು ತಮ್ಮ ಸಚಿವ ಸಂಪುಟಕ್ಕೆ ಇಬ್ಬರು ಭಾರತೀಯ-ಅಮೆರಿಕನ್ನರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಖ್ಯಾತ ವೈದ್ಯ ಡಾ.ವಿವೇಕ್ ಮೂರ್ತಿ ಮತ್ತು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರುಣ್ ಮಜುಂದಾರ್ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇದನ್ನೂ ಓದಿ: ಜೋ ಬಿಡೆನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮೊದಲ ಮಾತುಕತೆ
43 ವರ್ಷದ ವಿವೇಕ್ ಮೂರ್ತಿ ಅವರನ್ನು ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಹುದ್ದೆಗೆ ಮತ್ತು ಅರುಣ್ ಮಜುಂದಾರ್ ಅವರನ್ನು ಇಂಧನ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಸುದ್ದಿ ಓದಿ: ಐತಿಹಾಸಿಕ ಗೆಲುವಿಗೆ ಜೋ ಬಿಡೆನ್, ಕಮಲಾ ಹ್ಯಾರಿಸ್ರನ್ನು ಅಭಿನಂದಿಸಿದ ವಿಶ್ವ ನಾಯಕರು
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಆಡಳಿತಾವಧಿಯಲ್ಲಿ ಸರ್ಜನ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ ವಿವೇಕ್ ಮೂರ್ತಿ ಪ್ರಸ್ತುತ ಕೋವಿಡ್ಗೆ ಸಂಬಂಧಿಸಿದಂತೆ ಜೋ ಬಿಡೆನ್ ಅವರಿಗೆ ಸಲಹೆ ನೀಡುತ್ತಿದ್ದಾರೆ. ಕೋವಿಡ್-19 ಅನ್ನು ನಿಭಾಯಿಸುವುದು ತನ್ನ ಆಡಳಿತದ ಮೊದಲ ಕಾರ್ಯ ಎಂದು ಬಿಡೆನ್ ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆ ವಿವೇಕ್ ಮೂರ್ತಿ ಅವರು ಸಾರ್ವಜನಿಕ ಆರೋಗ್ಯ ತಜ್ಞರಲ್ಲಿ ಒಬ್ಬರಾಗಿದ್ದರು, ಚುನಾವಣಾ ಅಭಿಯಾನದ ಸಮಯದಲ್ಲಿ ಸಾಂಕ್ರಾಮಿಕ ರೋಗದ ಬಗ್ಗೆ ಬಿಡೆನ್ಗೆ ಆಗಾಗ ಮಾಹಿತಿ ನೀಡುತ್ತಿದ್ದರು.
ಇದನ್ನೂ ಓದಿ: ಕೊನೆಗೂ ಸೋಲೊಪ್ಪಿಕೊಂಡು ಅಧಿಕಾರ ತ್ಯಜಿಸುವ ಸುಳಿವು ನೀಡಿದ ಡೊನಾಲ್ಡ್ ಟ್ರಂಪ್!
ವಿವೇಕ್ ಮೂರ್ತಿ ಕರ್ನಾಟಕ ಮೂಲದವರಾಗಿದ್ದು, ಅವರ ಅಧಿಕಾರಾವಧಿಯಲ್ಲಿ ಮಾದಕವಸ್ತು ಮತ್ತು ಆಲ್ಕೊಹಾಲ್ ವ್ಯಸನದ ಬಗ್ಗೆ ಒಂದು ವಿಮರ್ಶಾತ್ಮಕ ವರದಿಯನ್ನು ಬಿಡುಗಡೆ ಮಾಡಿದ್ದರು. ಇದನ್ನು ‘ಅಮೆರಿಕಕ್ಕೆ ನೈತಿಕ ಪರೀಕ್ಷೆ’ ಎಂದು ಕರೆದಿದ್ದರು. ತಂಬಾಕು ಬಳಕೆ, ಏಡ್ಸ್, ಅಗತ್ಯದಂತಹ ಇತರ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಲು ದೈಹಿಕ ಚಟುವಟಿಕೆಗಾಗಿ ವರದಿಗಳನ್ನು ಸಿದ್ಧಪಡಿಸಿದ್ದರು.
ಈ ಸುದ್ದಿ ಓದಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ರನ್ನು ಸೋಲಿಸಿದ ಜೋ ಬಿಡೆನ್
ಇನ್ನು ಅರುಣ್ ಮಜುಂದಾರ್ ಅವರು ಸ್ಟ್ಯಾನ್ಫೋರ್ಡ್ನಲ್ಲಿನ ‘ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ ಏಜನ್ಸಿ’ ಮೊದಲ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿರುವ ಅವರು ಇಂಧನ ಸಂಬಂಧಿತ ವಿಷಯಗಳ ಕುರಿತು ಬಿಡೆನ್ಗೆ ಉನ್ನತ ಸಲಹೆಗಾರರಾಗಿದ್ದಾರೆ.
ಈ ಸುದ್ದಿ ಓದಿ: ಅಮೆರಿಕದ ಕೊರೊನಾ ಕಾರ್ಯಪಡೆಯ ಸಹ-ಅಧ್ಯಕ್ಷರಾಗಲಿರುವ ಕರ್ನಾಟಕ ಮೂಲದ ವಿವೇಕ್ ಮೂರ್ತಿ ..?
ಮಜುಂದಾರ್ ಅವರನ್ನು ಒಬಾಮಾ ಅವರು ನಾಮನಿರ್ದೇಶನ ಮಾಡಿದ್ದರು. ‘ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ’- ಎನರ್ಜಿ (ARPA-E) ನ ಸ್ಥಾಪಕ ನಿರ್ದೇಶಕರಾಗಲು 2009ರ ಅಕ್ಟೋಬರ್ನಲ್ಲಿ ಸೆನೆಟ್ ದೃಢಪಡಿಸಿದರು. ಅಲ್ಲಿ ಅವರು ಜೂನ್ 2012 ರವರೆಗೆ ಸೇವೆ ಸಲ್ಲಿಸಿದರು ಮತ್ತು ARPA-E ಶ್ರೇಷ್ಠತೆಯ ಮಾದರಿಯಾಗಲು ಸಹಾಯ ಮಾಡಿದರು. ಕಾಂಗ್ರೆಸ್ ಮತ್ತು ಇತರ ಮಧ್ಯಸ್ಥಗಾರರಿಂದ ಉಭಯಪಕ್ಷೀಯ ಬೆಂಬಲದೊಂದಿಗೆ ಆಡಳಿತಕ್ಕೆ ನಾವೀನ್ಯತೆ ನೀಡಿದರು.
ಈ ಸುದ್ದಿ ಓದಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ರನ್ನು ಸೋಲಿಸಿದ ಜೋ ಬಿಡೆನ್
ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬಿಡನ್ ತಮ್ಮ ಸಂಪುಟವು ವೈವಿಧ್ಯಮಯ ಸದಸ್ಯರನ್ನು ಒಳಗೊಂಡಿರುತ್ತದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಇಬ್ಬರು ಭಾರತೀಯ-ಅಮೆರಿಕನ್ನರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳಲು ಬಿಡೆನ್ ಪ್ಲಾನ್ ಮಾಡಿದ್ದಾರೆ.