. Washington D.C., DC, USA
ಅಮೆರಿಕ ಚುನಾವಣೆ: 8 ಕೋಟಿ ಮತ ಗಳಿಕೆ ಮೂಲಕ ಹೊಸ ದಾಖಲೆ ಬರೆಯಲಿರುವ ಜೋ ಬಿಡೆನ್
ಹೊಸ ದಾಖಲೆ ನಿರ್ಮಿಸಲಿರುವ ಜೋ ಬಿಡೆನ್ (Photo Credit: Facebook / @Joe Biden)
- ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ 8 ಕೋಟಿ ಮತ ಗಳಿಕೆ ಸಮೀಪಿಸಿದ ಜೋ ಬಿಡೆನ್
- ಅಮೆರಿಕ ಚುನಾವಣಾ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲಿರುವ ಡೆಮಾಕ್ರಟಿಕ್ ಅಭ್ಯರ್ಥಿ
- ಸದ್ಯ ಜೋ ಬಿಡೆನ್ 306 ಮತ ಗಳಿಸಿದ್ದರೆ, ಡೊನಾಲ್ಡ್ ಟ್ರಂಪ್ 232 ಮತ ಪಡೆದುಕೊಂಡಿದ್ದಾರೆ
ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಅವರ ಮತ ಗಳಿಕೆಯ ಸಂಖ್ಯೆ 8 ಕೋಟಿ ಸಮೀಪಿಸುತ್ತಿದ್ದು, ಇದು 1908ರ ಅಧ್ಯಕ್ಷೀಯ ಚುನಾವಣೆಯ ಬಳಿಕ ಅತಿಹೆಚ್ಚಿನ ಮತಗಳಿಕೆಯ ದಾಖಲೆಯಾಗಿದೆ.
ಈ ಸುದ್ದಿ ಓದಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ರನ್ನು ಸೋಲಿಸಿದ ಜೋ ಬಿಡೆನ್
ಅಧ್ಯಕ್ಷರಾಗಿ ಬಿಡೆನ್ ಪ್ರಮಾಣವಚನ ಸ್ವೀಕರಿಸಿದರೆ, ಅಮೆರಿಕ ಇತಿಹಾಸದಲ್ಲೇ ಇದುವರೆಗೆ ಅತಿಹೆಚ್ಚು ಮತ ಗಳಿಸಿದ ದಾಖಲೆಯೊಂದಿಗೆ ಶ್ವೇತಭವನ ಕಚೇರಿಯನ್ನು ಪ್ರವೇಶಿಸಲಿದ್ದಾರೆ. ಅದೇ ರೀತಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತಿ ಹೆಚ್ಚಿನ ಮತಗಳನ್ನು ಕಳೆದುಕೊಂಡ ವ್ಯಕ್ತಿಯಾಗಲಿದ್ದಾರೆ.
ಇದನ್ನೂ ಓದಿ: ಜೋ ಬಿಡೆನ್ ಸಂಪುಟದಲ್ಲಿ ಇಬ್ಬರು ಭಾರತೀಯ-ಅಮೆರಿಕನ್ನರಿಗೆ ಪ್ರಮುಖ ಸ್ಥಾನ
ಇಲ್ಲಿಯವರೆಗೆ ಸುಮಾರು 15.5 ಕೋಟಿ ಮತಗಳನ್ನು ಎಣಿಕೆ ಮಾಡಲಾಗಿದೆ. ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕ್ ನಲ್ಲಿ ಇನ್ನೂ ಕೂಡ ಮತ ಎಣಿಕೆ ನಡೆಯುತ್ತಿದೆ. ಅಸೋಸಿಯೇಟೆಡ್ ಪ್ರೆಸ್ ಮತ್ತು ಎಲೆಕ್ಷನ್ಸ್ ಪ್ರಾಜೆಕ್ಟ್ ನ ಸದ್ಯದ ಮಾಹಿತಿಯ ಪ್ರಕಾರ ಶೇ.65ರಷ್ಟು ಮತದಾನವಾಗಿದ್ದು, ಇದು 1908ರ ನಂತರದ ಅತಿ ಹೆಚ್ಚು ಮತದಾನ ಪ್ರಮಾಣವಾಗಿದೆ.
ಇದನ್ನೂ ಓದಿ: ಕೊನೆಗೂ ಸೋಲೊಪ್ಪಿಕೊಂಡು ಅಧಿಕಾರ ತ್ಯಜಿಸುವ ಸುಳಿವು ನೀಡಿದ ಡೊನಾಲ್ಡ್ ಟ್ರಂಪ್!
ಚುನಾವಣಾ ವಂಚನೆಯ ಆರೋಪದ ಮಧ್ಯೆ ಬಿಡೆನ್ ಆರೂವರೆ ಕೋಟಿಗೂ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ನವೆಂಬರ್ ಆರಂಭದ ದಿನಗಳಲ್ಲಿ ಚುನಾವಣಾ ಫಲಿತಾಂಶಗಳು ಹೊರಬಂದಾಗಿನಿಂದ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಮೋಸ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ. ಬಿಡೆನ್ ವಿರುದ್ಧ ಭಾರಿ ಹಿನ್ನಡೆ ಅನುಭವಿಸಿರುವ ಅವರು ಹತಾಶ ಭಾವನೆಯಲ್ಲಿ ಜನಾದೇಶ ತನ್ನ ಪರವಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಜೋ ಬಿಡೆನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮೊದಲ ಮಾತುಕತೆ
ಚುನಾವಣೆಯಲ್ಲಿ ಅಕ್ರಮವಾಗಿರುವ ಬಗ್ಗೆ ಇದೀಗ ಸದ್ದು ಜಾಸ್ತಿಯಾಗಿದೆ. ಆ ಸದ್ದು ಕಡಿಮೆಯಾದ ಬಳಿಕ ಬಿಡೆನ್ ಅವರು ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸಲಿದ್ದಾರೆ ಎಂದು ರೈಸ್ ವಿಶ್ವವಿದ್ಯಾಲಯದ ಅಧ್ಯಕ್ಷೀಯ ಇತಿಹಾಸಕಾರ ಡೌಗ್ಲಾಸ್ ಬ್ರಿಂಕ್ಲೆ ಹೇಳಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ ಸದ್ಯ ಬಿಡೆನ್ 290 ಹಾಗೂ ಟ್ರಂಪ್ 232 ಎಲೆಕ್ಟೋರಲ್ ಕಾಲೇಜು ಮತಗಳನ್ನು ಪಡೆದಿದ್ದಾರೆ. ಈ ಮತಗಳು ಜಾರ್ಜಿಯಾದ ಮತದಾರರನ್ನು ಒಳಗೊಂಡಿಲ್ಲ, ಅಲ್ಲಿ ಟ್ರಂಪ್ ವಿರುದ್ಧ ಬಿಡೆನ್ ಶೇ.0.3ರಷ್ಟು ಮತಗಳಿಂದ ಮುನ್ನಡೆ ಸಾಧಿಸಲಿದ್ದಾರೆ.
ಈ ಸುದ್ದಿ ಓದಿ: ಐತಿಹಾಸಿಕ ಗೆಲುವಿಗೆ ಜೋ ಬಿಡೆನ್, ಕಮಲಾ ಹ್ಯಾರಿಸ್ರನ್ನು ಅಭಿನಂದಿಸಿದ ವಿಶ್ವ ನಾಯಕರು
ಬಿಡೆನ್ ಮುನ್ನಡೆ ಸಾಧಿಸಿದರೆ ಅವರು 306 ಎಲೆಕ್ಟೋರಲ್ ಕಾಲೇಜು ಮತಗಳನ್ನು ಪಡೆದು ಗೆಲ್ಲುತ್ತಾರೆ. ಅದು ಟ್ರಂಪ್ 2016 ರಲ್ಲಿ ಗೆದ್ದ ರೀತಿ. ಆಗ ಟ್ರಂಪ್ ಇದನ್ನು ದೊಡ್ಡ ಕುಸಿತ ಎಂದು ಬಣ್ಣಿಸಿದ್ದರು. ಟ್ರಂಪ್ 232 ಎಲೆಕ್ಟೋರಲ್ ಕಾಲೇಜು ಮತಗಳನ್ನು ಪಡೆದುಕೊಳ್ಳಲಿದ್ದಾರೆ.
ಈ ಸುದ್ದಿ ಓದಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ರನ್ನು ಸೋಲಿಸಿದ ಜೋ ಬಿಡೆನ್
ಹಿಂದಿನ ಚುನಾವಣೆಯಲ್ಲಿ ಟ್ರಂಪ್ ಮತ್ತು ಅವರ ಎದುರಾಳಿಯ ನಡುವಿನ ಅಂತರವು ಪ್ರಮುಖ ಚುನಾವಣಾ ರಾಜ್ಯಗಳಲ್ಲಿ 77,000 ಮತಗಳಷ್ಟಿತ್ತು. ಅರಿಜೋನಾ, ಜಾರ್ಜಿಯಾ ಮತ್ತು ವಿಸ್ಕಾನ್ಸಿನ್ನಾದ್ಯಂತ 45,000 ಮತಗಳ ಅಂತರದೊಂದಿಗೆ ಬಿಡೆನ್ಗೆ ಈ ಬಾರಿ ಅಲ್ಪ ಮುನ್ನಡೆಯಾಗಿದೆ.